ಗಾಡ್ವಿನ್, ಹೆನ್ರಿ ಥಾಮಸ್ 
1784-1853. ಬ್ರಿಟಿಷ್ ಭಾರತ ಸೇನೆಯ ಒಬ್ಬ ಅಧಿಕಾರಿ. 1824-26ರಲ್ಲಿ ಒಂದನೆಯ ಬರ್ಮ ಯುದ್ಧದಲ್ಲಿ ಭಾಗವಹಿಸಿದ್ದ. 1846ರಲ್ಲಿ ಮೇಜರ್ ಜನರಲ್ ಆದ.
1852-53ರಲ್ಲಿ ನಡೆದ ಎರಡನೆಯ ಬರ್ಮ ಯುದ್ಧದಲ್ಲಿ ಗಾಡ್ವಿನ್ ನಾಯಕತ್ವದಲ್ಲಿ ಬ್ರಿಟಿಷ್ ಭೂಸೇನೆ ಕಾರ್ಯಾಚರಣೆ ನಡೆಸಿತು. ತನ್ನ ಸಾಹಸಕ್ಕಾಗಿ ನೈಟ್ ಪದವಿ ಪಡೆದಿದ್ದ ಗಾಡ್ವಿನ್ 1853ರಲ್ಲಿ ಸಿಮ್ಲಾದಲ್ಲಿ ತೀರಿಕೊಂಡ.			(ವಿ. ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ